About

ವಿದ್ಯಾಭ್ಯಾಸವು ಪ್ರತಿಯೊಬ್ಬರಿಗೂ ಉತ್ತಮ ಜ್ಞಾನ, ಮಾನಸಿಕ ಸ್ಥಿರತೆ, ತಾರ್ಕಿಕ ಚಿಂತನೆ, ಮತ್ತು ಸಮಸ್ಯೆಗಳನ್ನು ಪರಿಹರಿಸುವ ನೈಪುಣ್ಯತೆಯನ್ನು ಗಳಿಸಿಕೊಡುತ್ತದೆ. ಕೇವಲ ಮೂಲಭೂತ ಶಿಕ್ಷಣವನ್ನು ಮಾತ್ರ ಗಳಿಸಿದ ಕುಟುಂಬಗಳಲ್ಲಿ ಸಮತೋಲನ ಬೆಳವಣಿಗೆ, ಪ್ರಗತಿಪರ ಚಿಂತನೆ, ಶಾAತಿಯುತವಾದ ಆರೋಗ್ಯದಾಯಕ ಮತ್ತು ಸಂತಸದ ಕ್ಷಣಗಳನ್ನು ಕಾಣಲು ಸಾಧ್ಯವಿರುವುದಿಲ್ಲ. ಹಳ್ಳಿಕಾರ ಸಮುದಾಯದಲ್ಲಿರುವ ವಿದ್ಯಾಭ್ಯಾಸ ಮಟ್ಟ ಮತ್ತು ನ್ಯೂನತೆಗಳನ್ನು ಪರಿಶೀಲಿಸಿ, ಸುಧಾರಿತ ತಂತ್ರಜ್ಞಾನದ ತ್ವರಿತ ಲಭ್ಯತೆ, ಸಮೀಪದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು, ಉತ್ತಮ ಬೋಧಕರು, ಇ-ಲೈಬ್ರರಿಗಳಂಥ ಸೌಲಭ್ಯಗಳು ನಮ್ಮ ವಿದ್ಯಾರ್ಥಿಗಳ ಕೈಗೆಟುಕುತ್ತಿಲ್ಲ. ನಮ್ಮ ಬಹುತೇಕರ ಆದಾಯವು ಕೈಯಿಂದ ಬಾಯಿಯ ಬಳಕೆಗೂ ನಿಲುಕುತ್ತಿಲ್ಲ ಮತ್ತು ಪೋಷಕರು ವಿದ್ಯಾರ್ಥಿಗಳ ವೆಚ್ಚವನ್ನು ಹೂಡಿಕೆಯೆಂದು ಪರಿಗಣಿಸದೇ, ಖರ್ಚೆಂದು ಪರಿಗಣಿಸುತ್ತಿರುವುದನ್ನು ಮನಗಾಣಲಾಗಿದೆ. ಸಮುದಾಯದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯಲ್ಲಿ ಉತ್ತಮ ಸಾಮರ್ಥ್ಯವಿದ್ದರೂ ಅವಶ್ಯವಾದ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಉತ್ತೇಜನಗಳು ಸೂಕ್ತ ಸಮಯದಲ್ಲಿ ದೊರೆಯದೆÀ ಮಂದಗತಿಯಲ್ಲಿ ಸಾಗುತ್ತಾ ಹಿಂದೆ ಬಿದ್ದಿದ್ದಾರೆ. ತಮಗೆಲ್ಲಾ ತಿಳಿದಂತೆ ನನ್ನ ತಂದೆ-ತಾಯಿಯರ ಹೆಸರಿನಲ್ಲಿ ೨೦೨೨ನೇ ಸಾಲಿನಲ್ಲಿ “ಲೇಟ್ ಶ್ರೀಮತಿ ರಂಗಮ್ಮ ಮತ್ತು ಲೇಟ್ ಶ್ರೀ ಮುನಿರಂಗಪ್ಪ ಹಳ್ಳಿಕಾರ ಫೌಂಡೇಷನ್ ಟ್ರಸ್ಟ್” ಅನ್ನು ೨೦೨೨ರಲ್ಲಿ ಸ್ಥಾಪಿಸಲಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸಮುದಾಯದ ಯುವ ಪೀಳಿಗೆಯನ್ನು ಉತ್ತಮ ಜ್ಞಾನ, ಕೌಶಲ್ಯ, ಆಧ್ಯಾತ್ಮಿಕ ಭಾವನೆ, ಸಾಮಾಜಿಕತೆ ಮತ್ತು ಉತ್ತಮ ಆರ್ಥಿಕತೆಗಳನ್ನೊಳಗೊಂಡAತೆ ಸರ್ವ ರೀತಿಯಿಂದಲೂ ಸತ್ಪçಜೆಗಳನ್ನಾಗಿ ಮಾಡಲು ಅಗತ್ಯವಿರುವ ವಿದ್ಯಾಭ್ಯಾಸವನ್ನು ಒದಗಿಸುವುದು ಈ ಟ್ರಸ್ಟ್ನ ಮೂಲ ಉದ್ದೇಶವಾಗಿರುತ್ತದೆ. ಟ್ರಸ್ಟ್ ವತಿಯಿಂದ ಕಳೆದ ಸಾಲಿನಿಂದ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು ಅದರ ವಿವರ ಕೆಳಕಂಡAತಿದೆ :- ೧) ೨೦೨೧-೨೨ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. / ಪಿ.ಯು.ಸಿ. ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಶೇ.೯೦ ಮತ್ತು ಅದಕ್ಕಿಂತ ಹೆಚ್ಚು ಅಂಕಗಳಿಸಿದ ೧೦೮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅವರ ಪೋಷಕರೊಂದಿಗೆ ಸನ್ಮಾನಿಸಲಾಗಿದೆ. ೨) ಎರಡನೇ ಸಮಾರಂಭದಲ್ಲಿ ೨೦೨೧-೨೨ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ / ಪದವಿ ಪರೀಕ್ಷೆಗಳಲ್ಲಿ ಆಯಾ ವರ್ಷದಲ್ಲಿ ಯಾವುದೇ ಬಾಕಿ ಉಳಿಯದಂತೆ ಸರಾಸರಿ ಶೇ.೯೦ ಮತ್ತು ಹೆಚ್ಚು ಅಂಕಗಳಿಸಿದ ೨೮ ವಿದ್ಯಾರ್ಥಿಗಳೂ ಸಹ ಈ ಪ್ರಯೋಜನಕ್ಕೆ ಭಾಜನರಾದರು. ೩) ಕ್ರೀಡೆ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಉನ್ನತ ಶಿಕ್ಷಣಗಳಲ್ಲಿ ವಿಶೇಷ ಸಾಧನೆಗಳಿಸಿದ ೬ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು. ೪) ಎಸ್.ಎಸ್.ಎಲ್.ಸಿ. / ಪಿ.ಯು.ಸಿ. ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುವಾಗುವಂತೆ ಬೆಂಗಳೂರಿನ ಪ್ರತಿಷ್ಠಿತ ಆರ್.ವಿ. ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದ್ದು ೪೦ ವಿದಾರ್ಥಿಗಳು ಈ ಪ್ರಯೋಜನ ಪಡೆಯುತ್ತಿದ್ದಾರೆ. ೫) ಪದವಿ / ಸ್ನಾತಕೋತ್ತರ ಪದವಿ ಗಳಿಸಿದ ೯ ವಿದ್ಯಾರ್ಥಿಗಳನ್ನು ಗುರುತಿಸಿ ನಾಗರಿಕ ಸೇವಾ ಪರೀಕ್ಷೆಗಳಿಗೆ ಅನುವು ಮಾಡಿಕೊಡಲು ಬೆಂಗಳೂರಿನ ಪ್ರತಿಷ್ಠಿತ ಇಂಡಿಯಾ೪ಐ.ಎ.ಎಸ್. ಅಕಾಡೆಮಿಯಲ್ಲಿ ಸಕಲ ಸೌಲಭ್ಯಗಳೊಂದಿಗೆ ತರಬೇತಿಯನ್ನು ನೀಡಲಾಗುತ್ತಿದೆ. ೬) ೨೦೨೨-೨೩ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ / ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಶೇ. ೯೦ಕ್ಕೂ ಹೆಚ್ಚು ಅಂಕಗಳಿಸಿದ ೮೦ ವಿದ್ಯಾರ್ಥಿಗಳಿಗೆ ಅವರ ಪೋಷಕರೊಂದಿಗೆ ಸನ್ಮಾನಿಸಿ ಪ್ರೋತ್ಸಾಹ ಧನ ನೀಡಲಾಯಿತು. ೭) ೨೦೨೨-೨೩ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಸಮುದಾಯದ ೭೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರೂ. ೫೦೦೦/- ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಆರ್.ಎಂ.ಆರ್. ಹಳ್ಳಿಕಾರ ಫೌಂಡೇಷನ್ ಟ್ರಸ್ಟ್ ವತಿಯಿಂದ ೨೦೨೨-೨೩ನೇ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೊಮಾ/ಪದವಿ/ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಶೇ.೯೦ ಮತ್ತು ಅದಕ್ಕಿಂತ ಹೆಚ್ಚು ಅಂಕಗಳಿಸಿದ ಹಳ್ಳಿಕಾರ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರ ಪೋಷಕರೊಂದಿಗೆ ಗೌರವಿಸಲು ಹಾಗೂ ಪ್ರೋತ್ಸಾಹಧನ ನೀಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಳ್ಳಿಕಾರ ಸಮುದಾಯದ ಎಲ್ಲರೂ ಈ ಯೋಜನೆಗೆ ಕೈಜೋಡಿಸಿ ಯುವ ಸಮೂಹವನ್ನು ಉತ್ತೇಜಿಸಿ ಪ್ರೋತ್ಸಾಹಿಸುವಂತೆ ಕೋರುತ್ತೇನೆ..